| 1 |
ಡಾ. ಆರ್.ಲಕ್ಷ್ಮೀನಾರಾಯಣ |
ಗೌರವಾಧ್ಯಕ್ಷರು |
📞 9449028996 |
ಡಾ. ಆರ್. ಲಕ್ಷ್ಮೀನಾರಾಯಣ ಅವರು ೧೯೭೧ ರಿಂದ ೨೦೦೬ರವರೆಗೆ ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕ, ಪ್ರಾಧ್ಯಾಪಕ ಮತ್ತು ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿ, ೨೦೦೬ ಮೇ ಯಿಂದ ೨೦೦೭ರ ಡಿಸೆಂಬರ್ ವರೆಗೆ ಧಾರವಾಡದಲ್ಲಿ ಇಲಾಖೆಯ ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಡಾ.ಪಿ.ವಿ.ನಾರಾಯಣ ಅವರ ಮಾರ್ಗದರ್ಶನದಲ್ಲಿ ೨೦೦೪ರಲ್ಲಿ ‘ವಕ್ರೋಕ್ತಿ ಜೀವಿತ- ಒಂದು ಅಧ್ಯಯನ’ ಎಂಬ ಮಹಾ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಪಿ.ಎಚ್.ಡಿ. ಪದವಿ ಪಡೆದಿರುತ್ತಾರೆ. ಇಂಗ್ಲಿಷ್ ಮತ್ತು ಹಿಂದಿಯಿಂದ ಅನುವಾದ ಮಾಡುವುದರಲ್ಲಿ ನಿರತರು. ಆರು ವಿಮರ್ಶಾ ಕೃತಿಗಳು, ಹನ್ನೊಂದು ಅನುವಾದಿತ ಕೃತಿಗಳು ಹಾಗೂ ಮೂರು ಸಂಪಾದಿತ ಕೃತಿಗಳು ಪ್ರಕಟಗೊಂಡಿವೆ.
ಪ್ರಶಸ್ತಿಗಳು: ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ, ೨೦೦೪ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೨೦೧೩ರ ಕರ್ನಾಟಕ ಸಾಹಿತ್ಯ ಅಕಡೆಮಿ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ ಹಾಗೂ ರಾಜ್ಯ ಸರ್ಕಾರದಿಂದ ಉತ್ತಮ ಕಾಲೇಜು ಶಿಕ್ಷಕ ಪ್ರಶಸ್ತಿ. |
 |
| 2 |
ಡಾ. ಬೈರಮಂಗಲ ರಾಮೇಗೌಡ |
ಅಧ್ಯಕ್ಷರು |
- |
ವಿಮರ್ಶಾ ಗ್ರಂಥಗಳು, ಕಥಾಸಂಕಲನ, ವ್ಯಕ್ತಿ ಚಿತ್ರ , ಜಾನಪದ ಕೃತಿಗಳು ವ್ಯಕ್ತಿಚಿತ್ರಗಳ ರಚನೆ
• ಹಲವಾರು ಸ್ಮರಣೆ ಸಂಚಿಕೆಗಳೂ ಪುಸ್ತಕಮಾಲೆಗಳು ಹಾಗೂ ಸಾಹಿತ್ಯ ಅಕಾಡೆಮಿಯ ವಾರ್ತಾಪತ್ರ ಮುಂತಾದವುಗಳ ಸಂಪಾದನೆ
• ಅಧ್ಯಕ್ಷ ಬಿಎಮ್ ಸಂಜೆ ಪದವಿ ಮಹಾವಿದ್ಯಾಲಯ ಬೆಂಗಳೂರು
• ಹಲವಾರು ಸಂಘಸಂಸ್ಥೆಗಳಲ್ಲಿ ಪದಾಧಿಕಾರಿ ಹಾಗೂ ಹಲವಾರು ಸಮಿತಿಗಳಲ್ಲಿ ಸದಸ್ಯತ್ವ.
• ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಸಾಹಿತ್ಯ ಕೌಸ್ತುಬ ಪ್ರಶಸ್ತಿ , ವಿಶ್ವಮಾನವ ಪ್ರಶಸ್ತಿ, ಮುರುಘಾಶ್ರೀ ಪ್ರಶಸ್ತಿ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಕರ್ನಾಟಕ ರತ್ನಶ್ರೀ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು. |
 |
| 3 |
ಡಾ. ಪ್ರೊ|| ಶಾಂತರಾಜು |
ಗೌರವಕಾರ್ಯದರ್ಶಿ |
- |
ಸಹಪ್ರಾಧ್ಯಾಪಕರರು ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರು ವಿಜಯಾ ಕಾಲೇಜು ಬೆಂಗಳೂರು. • ಹಲವಾರು ಲೇಖನಗಳು, ೧೫ ಕೃತಿಗಳ ಸಂಪಾದನೆ, • ಟಿ.ವಿ ಮತ್ತು ರೇಡಿಯೋಗಳಲ್ಲಿ ಕಾರ್ಯಕ್ರಮ, • ೨೦ಕ್ಕೂ ಮೀರಿ ನಾಟಕಗಳಲ್ಲಿ ಅಭಿನಯ • ಕೆಂಪೇಗೌಡಪ್ರಶಸ್ತಿ, ಕುವೆಂಪು ಸಾಹಿತ್ಯ ರತ್ನ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. |
 |
| 4 |
ಪ್ರೊ. ಚಂದ್ರಶೇಖರ್ ನಾದೂರು |
ಗೌರವ ಕೋಶಾಧಿಕಾರಿ ಮತ್ತು ಲೋಚನ ಸಂಪಾದಕರು |
- |
- |
 |
| 5 |
ಡಾ. ವಿಜಯಾ ಸುಬ್ಬರಾಜ್ |
ಸದಸ್ಯರು |
- |
ವಿದ್ಯಾರ್ಹತೆ:ಬಿಎಸ್ ಸಿ, ಎಂ ಎ,, ಪಿಹೆಚ್ ಡಿ ಎಂ ಎ(ಇಂಗ್ಲೀಷ್), ಎಲ್.ಎಲ್.ಬಿ, ಫ್ರೆಂಚ್ ಭಾಷೆಯಲ್ಲಿ ಡಿಪ್ಲೊಮಾ, ಸಾಹಿತ್ಯರತ್ನ(ಹಿಂದಿ) ವೃತ್ತಿ: ಪ್ರಾಧ್ಯಾಪಕರು(ನಿವೃತ್ತ), ಎಂ. ಇ. ಎಸ್, ಕಾಲೇಜು, ಭೆಂಗಳೂರು ಪ್ರಕಟಿತ ಕೃತಿಗಳು: ೧೨ ಕವನ ಸಂಕಲನಗಳು, ೯ ಕಾದಂಬರಿಗಳು, ೭ ಸಣ್ಣಕಥೆಗಳ ಸಂಕಲನಗಳು, ೮ ವಿಮರ್ಶಾ ಕೃತಿಗಳು, ೧೧ ಜೀವನ ಚರಿತ್ರೆಗಳು, ೧೪ ನಾಟಕಗಳು, ೨ ಮಕ್ಕಳ ಕಾದಂಬರಿಗಳು, ೧೪ ರೇಡಿಯೋ ಲೇಖನಗಳು, ನೂರಾರು ಬಿಡಿ ಲೇಖನಗಳು, ಪುರಸ್ಕಾರಗಳು: ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಒಳಗೊಂಡಂತೆ ೨೬ಕ್ಕೂ ಹೆಚ್ಚು ಪ್ರಶಸ್ತಿ ಪುರಸ್ಕಾರಗಳು, |
 |
| 6 |
ಶ್ರೀ ಅಶ್ವತ್ಥನಾರಾಯಣ ಶಾಸ್ತ್ರೀ (ನೈಷಧಂ. ಎಸ್ಸೆ) |
ಸದಸ್ಯರು |
- |
- |
 |
| 7 |
ಡಾ. ಎನ್. ಗೋಪಾಲಕೃಷ್ಣ |
ಸದಸ್ಯರು |
- |
- |
 |
| 8 |
ಪ್ರೊ.ಜಿ.ಅಶ್ವತ್ಥನಾರಾಯಣ |
ಸದಸ್ಯರು |
- |
ಸರ್ಕಾರಿ ಡಿಗ್ರಿ ಕಾಲೇಜುಗಳಲ್ಲಿ ೩೦ ವರ್ಷ ಸೇವೆ ಸಲ್ಲಿಸಿ ಪ್ರಾಧ್ಯಾಪಕರಾಗಿ ನಿವೃತ್ತರು. ಹಂಪಿ ವಿಶ್ವವಿದ್ಯಾಲಯದ ಎಂಫಿಲ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರು. ಕೆಎ.ಎಸ್, ಐಎಎಸ್ ವಿದ್ಯಾರ್ಥಿಗಳಿಗೆ ತರಬೇತಿ ಸರ್ಕಾರಿ ಅಧಿಕಾರಿಗಳಿಗೆ ಆಡಳಿತ ಕನ್ನಡ ಶಿಬಿರಗಳನ್ನು ನಡೆಸಿದ್ದಾರೆ. ಅಮೇರಿಕಾದಲ್ಲಿ ಮಕ್ಕಳಿಗೆ ಕನ್ನಡ ಹೇಳಿಕೊಟ್ಟಿದ್ದಾರೆ. |
 |
| 9 |
ಶ್ರೀ ಬಿ.ಆರ್. ರವೀಂದ್ರನಾಥ್ |
ಸದಸ್ಯರು |
- |
ವಿತ್ತೀಯ ಸಲಹೆಗಾರ, ಅನುವಾದಕ, ಲೇಖಕ ,
ನಿರ್ದೇಶಕ, ಇನ್ಸ್ಟಿ ಟ್ಯೂಟ್ ಆಫ್ ಟ್ರಾನ್ಸೆಲೆಷನ್ ಸ್ಟಡೀಸ್ ಬೆಂಗಳೂರು
ಹಲವಾರು ಸಮಿತಿಗಳು, ಸಂಘ ಸಂಸ್ಥೆಗಳಲ್ಲಿ ಈ ಹಿಂದೆ ಹಾಗೂ ಈಗ ಸದಸ್ಯ/ಪದಾಧಿಕಾರಿ |
 |
| 10 |
ಶ್ರೀ ಸಂಗಮೇಶ್ ಬಾದವಾಡಗಿ |
ಸದಸ್ಯರು |
- |
ಶ್ರೀ ಸಂಗಮೇಶ ಬಾದವಾಡಗಿಯವರು ಕರ್ನಾಟಕ ಸರ್ಕಾರದ ಶಿಕ್ಷಣ ಮತ್ತು ಆಹಾರ ನಾಗರೀಕ ಸರಬರಾಜು ಇಲಾಖೆ ಸೇವೆ ಸಲ್ಲಿಸಿದ್ದು ಕರ್ನಾಟಕ ರಾಜ್ಯಗಡಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ವಿಶೇಷಾಧಿಕಾರಿಯಾಗಿ ನಿವೃತ್ತಿ ಹೊಂದಿದವರು. ಶ್ರೀಯುತರು ಎರಡು ಅವಧಿಗೆ ರಾಜ್ಯ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದು ಹಲವಾರು ಅಖಿಲಭಾರತ ಸಾಹಿತ್ಯ ಸಮ್ಮೇಳನ, ಜಿಲ್ಲಾ, ತಾಲೂಕು ಸಾಹಿತ್ಯಸಮ್ಮೇಳನಗಳನ್ನು ಸಂಘಟಿಸಿರುತ್ತಾರೆ. ಕುಷ್ಟಗಿ, ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.
ಶ್ರೀಯುತರು ವಿವಿಧ ಸಾಹಿತ್ಯ ಪ್ರಕಾರಗಳಿಗೆ ಸಂಬಂಧಿಸಿದಂತೆ ಒಟ್ಟು ಹದಿನೈದಕ್ಕು ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅನೇಕ ಹೊರದೇಶಗಳಿಗೂ ಅಲ್ಲಿನ ಕನ್ನಡ ಸಂಘಗಳ ಆಹ್ವಾನದ ಮೇರೆಗೆ ಭೇಟಿ ಕನ್ನಡ ಸಾಹಿತ್ಯ ಸಂಸ್ಕೃತಿ ಪರಿಚಯಿಸುವಲ್ಲಿ ಶ್ರಮಿಸಿದ್ದಾರೆ. ಅನೇಕ ರಾಜ್ಯಮಟ್ಟದ ಅಂತರಾಷ್ಟ್ರೀಯ ಮಟ್ಟದ ಸಂಸ್ಥೆಗಳಿಂದ ಅನೇಕ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. ಪ್ರಸ್ತುತ ಸಂಗಮೇಶ ಬಾದವಾಡಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿರುತ್ತಾರೆ. |
 |
| 11 |
ಡಾ.ಹೆಚ್. ಎಸ್. ಎಂ. ಪ್ರಕಾಶ್ |
ಸದಸ್ಯರು |
- |
- |
 |
| 12 |
ಶ್ರೀ ಸ್ವ್ಯಾನ್ ಕೃಷ್ಣಮುರ್ತಿ |
ಸದಸ್ಯರು |
- |
- |
 |
| 13 |
ಶ್ರೀ ಎ. ಎನ್. ಅನಂತಮುರ್ತಿ |
ಸದಸ್ಯರು |
- |
- |
 |
| 14 |
ಶ್ರೀ. ಡಿ.ನಂ. ವೆಂಕಟರಮಣಯ್ಯ |
ಸದಸ್ಯರು |
- |
ನಿವೃತ್ತ ಬ್ಯಾಂಕ್ ಅಧಿಕಾರಿ, ಹಲವಾರು ಸಂಘ ಸಂಸ್ಥೆಗಳಲ್ಲಿ ಈ ಹಿಂದೆ ಹಾಗೂ ಈಗ ಪದಾಧಿಕಾರಿಯಾಗಿ ಸೇವೆಸಲ್ಲಿಸಿರುತ್ತಾರೆ. ಇವರು ೨೦೧೦ರಿಂದ ೨೦೧೬ರ ವರೆಗೆ ಪ್ರತಿಷ್ಠಾನದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು. ಈ ಅವಧಿಯಲ್ಲಿ ಕೆಲ ಕಾಲ ಇವರು ಪ್ರತಿಷ್ಠಾನದ ಆಂತರಿಕ ಲೆಕ್ಕ ಪರಿಶೋಧಕರಾಗಿ ಲೆಕ್ಕಪತ್ರ ವ್ಯವಸ್ಥೆಯನ್ನು ಸದೃಢಗೊಳಿಸಿದ್ದಲ್ಲದೇ ಪ್ರತಿಷ್ಠಾನದ ಸರ್ವತೋಮುಖ ಬೆಳವಣಿಗೆ ಶ್ರಮಿಸಿರುತ್ತಾರೆ. |
 |
| 15 |
ಶ್ರೀ ಎಸ್. ರಾಮಲಿಂಗೇಶ್ವರ(ಸಿಸಿರಾ) |
ಸದಸ್ಯರು |
- |
- |
 |
| 16 |
ಶ್ರೀಮತಿ ಎಸ್.ಜಿ. ಮಾಲತಿಶೆಟ್ಟಿ |
ಸದಸ್ಯರು |
- |
- |
 |
| 17 |
ಡಾ.ಎನ್.ಆರ್. ಲಲಿತಾಂಬ |
ನಾಮ ನಿರ್ದೇಶಿತ ಸದಸ್ಯರು |
- |
- |
 |